ಅಭಿಪ್ರಾಯ / ಸಲಹೆಗಳು

ಪರಿಚಯ

ಭಾರತವು  ಶ್ರೀಮಂತ  ಜೀವವೈವಿಧ್ಯತೆ ಮತ್ತು ಅದಕ್ಕೆ ಸಂಬ೦ಧಿಸಿದ ಪಾರಂಪರಿಕ ಜ್ಞಾನವನ್ನು ಹೊಂದಿದ ರಾಷ್ಟçವಾಗಿದೆ. ೧೯೯೨ರ ಜೂನ್ ೫ರಂದು ಬ್ರೆಜಿಲ್ ದೇಶದ ರಿಯೋಡಿಜೆನೈರೋ ನಗರದಲ್ಲಿ ಜರುಗಿದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ದಿ ಸಮ್ಮೇಳನದಲ್ಲಿ (ಭೂಶೃಂಗಸಭೆಯಲ್ಲಿ) “ಜೈವಿಕವೈವಿಧ್ಯ” ಒಪ್ಪಂದಕ್ಕೆ ಅಂಕಿತ ಹಾಕಿದ ರಾಷ್ಟçಗಳಲ್ಲಿ ಭಾರತವು ಒಂದಾಗಿದೆ. ಜೈವಿಕವೈವಿಧ್ಯ ಒಡಂಬಡಿಕೆಯ ಪ್ರಮುಖ ಉದ್ದೇಶಗಳೆಂದರೆ ಜೀವವೈವಿಧ್ಯತೆಯ ಸಂರಕ್ಷಣೆ ಅದರ ಘಟಕಗಳ ನಿರಂತರ ಬಳಕೆ ಮತ್ತು ವಂಶವಾಹಿ ಸಂಪನ್ಮೂಲಗಳ ಬಳಕೆಯಿಂದ ದೊರೆಯುವ ಲಾಭ ಹಾಗೂ ನ್ಯಾಯ ಸಮ್ಮತ ಹಂಚಿಕೆಯಾಗಿರುತ್ತದೆ. ಜೈವಿಕ ಸಂಪನ್ಮೂಲಗಳ ಮೇಲೆ ಆಯಾ ರಾಷ್ಟçಗಳ ಸಾರ್ವಭೌಮ ಅಧಿಕಾರವನ್ನು ಈ ಒಡಂಬಡಿಕೆ ಅಂಗೀಕರಿಸಿದೆ.

ಕರ್ನಾಟಕ ಜೀವವೈವಿಧ್ಯ ಮಂಡಳಿಯು ಜೈವಿಕವೈವಿಧ್ಯ ಅಧಿನಿಯಮ ೨೦೦೨ರ ಪರಿಚ್ವೇದ ೨೨ರನ್ವಯ ಹಾಗೂ ಕರ್ನಾಟಕ ಸರ್ಕಾರದ ಆದೇಶದನ್ವಯ (ಸಂ.ಎಫ್‌ಇಇ/೧೨೫/ಇಎನ್‌ವಿ/ ೨೦೦೩, ದಿನಾಂಕ:೧೯/೦೬/೨೦೦೩) ಜೂನ್ ೨೦೦೩ರಲ್ಲಿ ಸ್ಥಾಪನೆಗೊಂಡು ೧ನೇ ಆಗಸ್ಟ್ ೨೦೦೩ರಿಂದ ಕಾರ್ಯಾರಂಭಗೊ೦ಡಿತು.

ಪ್ರಾರ೦ಭದಲ್ಲಿ ಸರ್ಕಾರವು ಮಂಡಳಿಯನ್ನು ಮಾನ್ಯ ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ ಸಚಿವರ ಅಧ್ಯಕ್ಷತೆಯಲ್ಲಿ ಐವರು ಪದನಿಮಿತ್ತ ಸದಸ್ಯರು ಮತ್ತು ಐವರು ಸರ್ಕಾರೇತರ ಸದಸ್ಯರನ್ನೊಳಗೊಂಡು ರಚಿಸಿ (ಕ್ರ.ಸ.ಎಫ್‌ಇಇ/೧೨೫/ಇಎನ್‌ವಿ/೨೦೦೩ ದಿನಾಂಕ ೨೧/೧೧/೨೦೦೩) ಆದೇಶ ಹೊರಡಿಸಿರುತ್ತದೆ. 

ಇತ್ತೀಚಿನ ನವೀಕರಣ​ : 02-03-2021 09:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ​​​
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080