ಅಭಿಪ್ರಾಯ / ಸಲಹೆಗಳು

ತತ್ವಗಳು

ಜೈವಿಕ ವೈವಿಧ್ಯ ಅಧಿನಿಯಮ 2002ನ್ನು ಜಾರಿಗೆತಂದಿರುವ ಮುಖ್ಯ ಉದ್ದೇಶವೇನೆಂದರೆ, “ಜೀವವೈವಿಧ್ಯತೆಯ ಸಂರಕ್ಷಣೆ, ಅದರ ಘಟಕಗಳ ಸುಸ್ಥಿರ ಬಳಕೆ ಮತ್ತು ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆ ಹಾಗೂ ಸಂಬಂಧಿತ ಸಾಂಪ್ರದಾಯಿಕ ಜ್ಞಾನದಿಂದ ಉಂಟಾಗುವ ಬಳಕೆ ಮತ್ತು ಲಾಭಗಳ ನ್ಯಾಯಸಮ್ಮತ ಹಂಚಿಕೆಯನ್ನು ಒದಗಿಸುವುದು”

 

 

ದೇಶದ ಶ್ರೀಮಂತ ಜೀವವೈವಿಧ್ಯತೆಯನ್ನು ಅತಿಯಾದ ಶೋಷಣೆಯನ್ನು ಬಳಕೆಯ ನಿಯಂತ್ರಣ ಮತ್ತು ಸುಸ್ಥಿರ ಬಳಕೆಯ ಮೂಲಕ ರಕ್ಷಿಸುವುದರ ಜೊತೆಗೆ ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮಧ್ಯಸ್ಥಗಾರರಿಂದ ಲಾಭಗಳ ಸಣ್ಣ ಪ್ರಮಾಣದ ಶೇಕಡಾವನ್ನು ಹಂಚಿಕೊಳ್ಳುವುದು. ಈ ಲಾಭವನ್ನು ಜೈವಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಬಳಸುವುದು ಈ ಅಧಿನಿಯಮದ ತಿರುಳು ಮತ್ತು ಬಳಕೆ ಮತ್ತು ಲಾಭ ಹಂಚಿಕೆಯ (ಎಬಿಎಸ್) ತತ್ವವಾಗಿದೆ.

 

 

ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮುಖ್ಯ ಆದೇಶಗಳಲ್ಲಿ ಒಂದಾದ ಮುಖ್ಯ ಅಂಶವೆಂದರೆ ವಾಣಿಜ್ಯ ಬಳಕೆಗಾಗಿ ಕೈಗಾರಿಕಾ ವಲಯಗಳು ಹಾಗೂ ಕಂಪನಿಗಳು ಪಡೆದುಕೊಳ್ಳುವ ಜೈವಿಕ ಸಂಪನ್ಮೂಲಗಳನ್ನು ನಿಯಂತ್ರಿಸುವುದು. ಈ ಘಟಕಗಳು ವಾಣಿಜ್ಯ ಬಳಕೆಗಾಗಿ ಜೈವಿಕ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಮುಂಚಿತವಾಗಿ ಸಂಬಂಧಪಟ್ಟ ರಾಜ್ಯ ಜೀವವೈವಿಧ್ಯ ಮಂಡಳಿಗಳಿಗೆ ಪೂರ್ವಾನುಮೋದನೆ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು [ಜೈವಿಕ ವೈವಿಧ್ಯ ಅಧಿನಿಯಮ 2002ರ ಪ್ರಕರಣ 7 ರನ್ವಯ] ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಮಂತ್ರಾಲಯದಿಂದ ಅಧಿಸೂಚಿಸಲ್ಪಟ್ಟ ಎಬಿಎಸ್ ವಿನಿಯಮಗಳು, 2014ರನ್ವಯ ಬಳಕೆ ಮತ್ತು ಲಾಭಗಳ ನ್ಯಾಯಸಮ್ಮತ ಹಂಚಿಕೆಯ ಬಾಧ್ಯತೆಗಳನ್ನು ಸಲ್ಲಿಸಬೇಕಾಗಿರುತ್ತದೆ.

 

 

ಜೈವಿಕ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಕಂಪನಿಗಳು/ಘಟಕಗಳು ಸಲ್ಲಿಸಿದ ಪೂರ್ವಾನುಮೋದನೆಯ ನಂತರ, ಎಬಿಎಸ್ ವಿನಿಯಮಗಳು, 2014ರನ್ವಯ ಎಬಿಎಸ್ ಬಾಧ್ಯತೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಎಬಿಎಸ್ ವಿನಿಯಮಗಳು 2014 ಲಾಭ ಹಂಚಿಕೆ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ ಮತ್ತು ವಾಣಿಜ್ಯ ಬಳಕೆಗಾಗಿ ಜೈವಿಕ ಸಂಪನ್ಮೂಲಗಳನ್ನು ಬಳಕೆ ಮಾಡುವ ತಯಾರಕರುಗಳಿಗೆ ಶೇಕಡಾವಾರು ಪ್ರಮಾಣ ಶೇ. 3 ರಿಂದ 5 ಹಾಗೂ ವ್ಯಾಪಾರಿಗಳಿಗೆ ಶೇ.1 ರಿಂದ 3 ರಷ್ಟಿರುತ್ತದೆ.(ವಿನಿಯಮ 3 ರ ಪ್ರಕಾರ) ಕಂಪನಿಗಳು/ಘಟಕಗಳು ತಮ್ಮ ಕಂಪನಿಯ ಉತ್ಪನ್ನದ ವಾರ್ಷಿಕ ಒಟ್ಟು ಕಾರ್ಖಾನೆ ಮಾರಾಟದ ಆಧಾರದ ಮೇಲೆ ಲಾಭಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಸಹ ಹೊಂದಿವೆ ಮತ್ತು ಇವುಗಳ ಶ್ರೇಣಿಕೃತ ಮಾಪಕ ಶೇ.0.1 ರಿಂದ 0.5 ರಷ್ಟಿರುತ್ತದೆ. [ವಿನಿಯಮ 4ರನ್ವಯ]. ಎಬಿಎಸ್ ವಿನಿಯಮಗಳು 2014 ರಲ್ಲಿ ಸಂಶೋಧನಾ ಫಲಿತಾಂಶಗಳ ವರ್ಗಾವಣೆ, ಭೌಧಿಕ ಆಸ್ತಿ ಹಕ್ಕುಗಳು ಮತ್ತು ಮೂರನೇ ವ್ಯಕ್ತಿಗೆ ಜೈವಿಕ ಸಂಪನ್ಮೂಲಗಳ ವರ್ಗಾವಣೆ ಅಥವಾ ಅದಕ್ಕೆ ಸಂಬಂಧಿಸಿದ ಜ್ಞಾನಕ್ಕಾಗಿ ಸಹ ಎಬಿಎಸ್ ಶೇಕಡವಾರು ಪ್ರಮಾಣವನ್ನು ನೀಡಲಾಗಿದೆ.

 

 

ಈ ಕಾಯ್ದೆ ಹಾಗೂ ಸಂಬಂಧಪಟ್ಟ ನಿಬಂಧನೆಗಳನ್ನು ಅನುಸರಣೆ ಮಾಡದಿರುವ ಘಟಕ/ಕಂಪನಿಗಳಿಗೆ ಜೈವಿಕ ವೈವಿಧ್ಯ ಅಧಿನಿಯಮ, 2002ರ ಪ್ರಕರಣ 58ರ ಪ್ರಕಾರ ಗುರುತಿಸಬಹುದಾದಂತಹ ಮತ್ತು ಜಾಮೀನುರಹಿತ ಶಿಕ್ಷೆ ಹಾಗೂ ಪ್ರಕರಣ 55 ಮತ್ತು 56 ರ ಪ್ರಕಾರ ದಂಡವನ್ನು ವಿಧಿಸಬಹುದಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 19-05-2020 05:02 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜೀವವೈವಿಧ್ಯ ಮಂಡಳಿ​​​
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080